Friday, July 8, 2016

ಐಐಟಿ ಎಂಬ ವಲಸಿಗರ ಹೆಬ್ಬಾಗಿಲು

ಐಐಟಿಗಾಗಿ ನಮ್ಮ ಧಾರವಾಡ ಮತ್ತು ರಾಯಚೂರು ಮಂದಿ ಕಿತ್ತಾಡಿದರು. ಐಐಟಿಯಿಂದ ನಮಗೆ ಯಾವ ಲಾಭವೂ ಇಲ್ಲ, ಅದಕ್ಕಾಗಿ ಕಿತ್ತಾಟ ಬೇಡವೆಂದು ಬಲ್ಲವರು ಮೊದಲಿಂದಲೂ ಹೇಳುತ್ತವೇ ಬಂದಿದ್ದಾರೆ. ಕನ್ನಡಿಗರಿಗೆ ಮಾತ್ರ ಬುದ್ಧಿ ಬರುವ ಲಕ್ಷಣ ಕಾಣುತ್ತಿಲ್ಲ.

ಈಗ ಧಾರವಾಡದಲ್ಲಿ ಶುರುವಾಗಿರುವ ಐಐಟಿಯಲ್ಲಿ 120 ಜನ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಕಿದೆ. ಇದರಲ್ಲಿ ಕನ್ನಡಿಗರು ಬರೀ 5 ಮಂದಿ ಮಾತ್ರ. ಉಳಿದವರೆಲ್ಲಾ ವಲಸಿಗರು.

ಹೀಗೆ ಶಿಕ್ಷಣದ ಹೆಸರಿನಿಂದ ವಲಸೆ ಬರುವವರು ನಾಳೆ ಇಲ್ಲೇ ಉದ್ಯೋಗವನ್ನೂ ಪಡೆದುಕೊಳ್ಳುತ್ತಾರೆ. ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮವೂ ಅನ್ಯರ ಪಾಲೇ ಆಗಲಿದೆ. ಅಭಿವೃದ್ಧಿಗೊಂಡ ಬೆಂಗಳೂರಿನಲ್ಲಿ ಹೇಗೆ ಕನ್ನಡಿಗರು ಅಬ್ಬೇಪಾರಿಗಳಾಗಿ ರೆಸ್ಯೂಮುಗಳನ್ನು ಹಿಡಿದುಕೊಂಡು ತಿರುಗುತ್ತಿದ್ದಾರೋ ಧಾರವಾಡದಲ್ಲೂ ಅದೇ ಸ್ಥಿತಿಗೆ ತಲುಪುತ್ತಾರೆ.

ಈಗ ಐಐಟಿ ಮಂದಿ ೪೭೦ ಎಕರೆ ಭುಮಿಯನ್ನು ಪುಕ್ಕಟೆಯಾಗಿ ಕೇಳುತ್ತಿದ್ದಾರೆ. ಕೆ.ಐ.ಎ.ಡಿ.ಬಿ ಯವರು ಪುಕ್ಕಟೆಯಾಗಿ ಕೊಡಲಾಗುವುದಿಲ್ಲವೆಂದು ತಕರಾರು ತೆಗೆದಿದ್ದಾರೆ. ತಕರಾರಿಗೆ ಕಾರಣ ತಿಳಿದು ಬಂದಿಲ್ಲ. ಸದ್ಯದಲ್ಲೇ ನರೇಂದ್ರ ಮೋದಿಯವರು ಬಂದು ಉದ್ಘಾಟನೆ ಮಾಡುವ ಸಂಭವವಿದೆ. ಎಂದಿನಂತೆ ಅವರು ಬಂದು ಹಿಂದಿಯಲ್ಲೇ ಮಾತನಾಡಿ ಹೋಗುತ್ತಾರೆ.

ಎಂದಿನಂತೆ ಅಬ್ಬೇಪಾರಿ ಕನ್ನಡಿಗರು ಕೈಯಲ್ಲಿ ಚಿಪ್ಪು ಹಿಡಿದುಕೊಂಡು "ಮೋದಿ ..ಮೋದಿ ...ಮೋದಿ" ಎಂದು ಅರಚುವುದನ್ನು ನೋಡುವುದೇ ಒಂದು ಮಜಾ!!

Sriharsha Melukote